ಒಂದೊಂದು ಸಲ ಮನಸ್ಸಿಗೆ ಎಷ್ಟು ಹಿಂಸೆ ಆಗುತ್ತೆ ಅಂದ್ರೆ ಅದನ್ನ ಕೇವಲ ಪದಗಳಲ್ಲಿ ಹೇಳೋಕೆ ನನಗೆ ಕಷ್ಟ ಆಗುತ್ತೆ..ಕಷ್ಟ ಅನ್ನೋದಕ್ಕಿಂತ ನನಗೆ ಅದನ್ನ ಪದಗಳ ರೂಪದಲ್ಲಿ ಬರಿಯೋಕೆ ಬರಲ್ಲ ಅನ್ನಿಸುತ್ತೆ. ನಾನು ಹೀಗೆ ಕೆಟ್ಟ ಕೆಟ್ಟ ಶಬ್ಧಗಳನ್ನ ಉಪಯೋಗಿಸಿ ಬರಿತೀನಿ ಅಂತ ಯಾರೋ ಎರೆಡು ಜನ ನಾಲಾಯಕ್ ಗಳು ತಮಗೆ ಅಕ್ಕ ತಂಗಿ ಇಲ್ಲವೇನೊ ಅಥವ ತಾವು ಮೂಲತಹ ಹೆಣ್ಣು ವಿರೋಧಿಗಳೇನೊ ಅನ್ನುವ ಹಾಗೆ ಕಚಡವಾಗಿ ಮೇಲ್ ಮಾಡಿದ್ರು ಅದನ್ನ ಹೇಳೋಕೆ ನನ್ನಂತ ಬಜಾರಿ?? ಗೆ ಬೆಜಾರು ಆಗುತ್ತೆ ಬಿಡಿ ಆ ವಿಷ್ಯ..ನಾಯಿ ಬೊಗಳಿದ್ರೆ ದೇವಲೋಕ ನು ಹಾಳಗಲ್ಲ ಅಂದ ಮೇಲೆ ನನಗೆ ಹೇಗೆ ಬೇಜಾರ್ ಆಗಬೇಕು? ನೀವ್ ಬೊಗುಳ್ತಾನೆ ಇರಿ ನಾನು ನನಗೆ ಅನ್ನಿಸಿದನ್ನ ಬರಿತಾನೆ ಇರ್ತೀನಿ...
ಹಾ..ನಾನು ಮನಸ್ಸಿಗೆ ಬೆಜಾರ್ ಆಗೋ ವಿಷ್ಯ ಮತಾಡ್ತ ಇದ್ದೆ...ಇದನ್ನ ಹೇಳಿಕೋಳ್ಳೊಕು ಬೇಜಾರು ಆಗುತ್ತೆ ಕೆಲವೊಂದು ವಿಷಯಗಳನ್ನ ನಾನು ಒಂದು ಮಾತಾಡಬಾರದು ಅಂದು ಕೊಂಡ್ರು ನನಗೆ ಹಾಗೆ ಇರೋಕೆ ಆಗೋಲ್ಲ. ಮೊದಲೆ ನನ್ನ ಗೆಳತಿಯರು ಮತ್ತೆ ನಮ್ಮ office ನ ಕೊಲೀಗ್ ಗಳು ನನಗೆ ಒಂದು ಹೆಸರಿಟ್ಟು ಬಿಟ್ಟಿದ್ದಾರೆ ಬಜಾರಿ...ಪರ್ವಾಗಿಲ್ಲ ಅವರಿಷ್ಟ ಬಂದಹ ಗೆ ನನ್ ಕರಿಲಿ..ಆವತ್ತು ಭಾನುವಾರ ಎಂದಿನಂತೆ ನರಕಕ್ಕೆ[officege] ರಜೆ...ನಾನು 'ಪ್ರತಿಭಾ' ನಂದಿನಿ' ನಮ್ಮ ರೂಮಿನ ಮೇಲಿರಿವ ಟೆರೆಸ್ ಮೇಲೆ ಎಂದಿನಂತೆ ಹಾದಿನಲ್ಲಿ ಬರೋ ಹೋಗೋ ಹುಡುಗರನ್ನ[ಸುಂದರವಾದ] ನೋಡುತ್ತ ನಿಂತಿದ್ವಿ..ಅಷ್ಟರಲ್ಲಿ ಪ್ರತಿಭಾ ಇದ್ದೋಳು ನೋಡ್ರೆ ಅಲ್ಲಿ ಜೊಲ್ಲು ಅಂಕಲ್ಲು ಅಂದ್ಲು..
ನಮ್ಮ ರೂಮಿನ ಪಕ್ಕದಲ್ಲೆ ಒಂದು ಮನೆ ಅಲ್ಲಿರೊ ಅಂಕಲ್ ನ ಕಂಡ್ರೆ ಪ್ರತಿಭಾ ಮತ್ತೆ ನಂದಿನಿ ಹಾವು ತುಳಿದ ಹಾಗೆ ಆಡುತ್ತ ಇದ್ರು. ಅದಕ್ಕೆ ಕಾರಣ ಕೆಲವೊಂದು ಸಲ ಹೇಳಿದ್ರು ಕೂಡ ಇಂತ ಜೊಲ್ ಅಂಕಲ್ ಗಳೂ [ಎಲ್ಲರೂ ಅಲ್ಲ] ಎಲ್ಲ ಕಡೆ ಇರೋ ವಿಷ್ಯಾನೆ ಅಂದುಕೊಂಡು ಸುಮ್ಮನಾಗಿದ್ದೆ. ಆದರೇ ಅವತ್ತು ಕಂಡಾ ಅಸಹ್ಯವನ್ನ ನನ್ನ ಜೀವನದಲ್ಲಿ ಯಾವತ್ತು ಮರಿಯಲ್ಲ.....ಕಮ್ಮಿ ಅಂದ್ರು ಆ ಹೆಣ್ಣು ಮಗು ಗೆ ೧೦ ವರ್ಷ ವಯಸ್ಸಿರಬಹುದು. ಬಿಡು ಪಕ್ಕದ ಮನೆ ಮಗುವಲ್ಲವ ಮುದ್ದು ಮಾಡಿದರೆ ತಪ್ಪೇನ್ ಇಲ್ಲ ಅಂದುಕೊಂಡು ಸುಮ್ಮನಾದ್ವಿ..ಆದರೆ ಯಾಕೊ ಅವನ ವರ್ತನೆ ನಮಗೆ ವಿಚಿತ್ರವೆನಿಸತೊಡಗಿತು...
ಆ ಮನೆಯ ಟೆರೆಸ್ ಮೇಲೆ ಪ್ರತಿದಿನ ಮಕ್ಕಳು ಆಟ ಆಡುತ್ತವೆ ಬಿಡುವಿನ ವೇಳೆಯಲ್ಲಿ. ಆವತ್ತು ಸದ್ಯ ಯವ ಮಗುವು ಇರಲಿಲ್ಲ ಅನ್ನಿಸುತ್ತೆ..ಮಗುವನ್ನು ಮೆಲೆ ಕರೆದುಕೊಂಡು ಬಂದವನೇ ವಿಚಿತ್ರ ವರ್ತನೆ ಶುರುಮಾಡಿದ.ಅಷ್ಟು ದೊಡ್ಡ ಮಗುವನ್ನ ಎತ್ತಿ ಮುದ್ದಾಡೊ ಅವಷ್ಯಕತೆ ಕೂಡ ಇರಲಿಲ್ಲ ಅನ್ನಿಸುತ್ತೆ. ಆದರೆ ಒಂದು ಚಿಕ್ಕ ಮಗುವನ್ನ ಪ್ರೀತಿಯಿಂದ ಮುದ್ದಾಡುವುದಕ್ಕೂ ಕಾಮದ ದ್ರುಷ್ಟಿಯಿಂದ ಮುದ್ದಡುವುದಕ್ಕು ವ್ಯತ್ಯಾಸವಿಲ್ಲವ? ಮಗುವನ್ನ ಬಲವಂತವಾಗಿ ಅಪ್ಪಿಕೊಂಡು ಮುದ್ದಡುತ್ತಿದ್ದ. ಸುಮ್ಮನಿದ್ದರೇ ಅನಹುತವೆಂದು ಕೊಂಡ ಪ್ರತಿಭಾ " ಅಯ್ಯೋ ಪಾಪಿ " ಅಂತ ಕೂಗಿ ಬಿಟ್ಲು .ಪ್ರತಿಭಳನ್ನ ನೋಡಿದವನೇ ಟೆರೆಸ್ ಇಳಿದು ಓಡಿಬಿಟ್ಟ..ಹೇಳಿ ಅವತ್ತು ತಡಿಯದಿದ್ದರೆ ಎಂತಹ ಅನಾಹುತವಗುತ್ತಿತ್ತು?
ಅವತ್ತು ಕೋಪ ಸುಮ್ಮನೆ ಕಮ್ಮಿಯಾಗಿರಲಿಲ್ಲ..ಅವನ ಮನೆಗೆ ನಾನು ಮತ್ತೆ ಪ್ರತಿಭ ಹೋಗಿ ಅವನ ಮಾನ ಮರ್ಯದೆ ತೆಗೆದೇ ಬಿಡಬೇಕಂತ ಹೊರಟಿದ್ವಿ. ಆದರೆ ನಮ್ಮಲ್ಲಿ ಮಹಾನ್ ಗಾಂಧಿವಾದಿ ನಂದಿನಿ ಬೇಡ ಕಂಡ್ರೆ ಆಮೆಲೆ ನಮ್ಗೆ ಎನಾದ್ರು ತೊಂದ್ರೆ ಆದ್ರೆ? ಮೊನ್ನೆ ಮೊನ್ನೆ ಅಷ್ಟೆ ಕೆಲ್ಸಕ್ಕೆ ಸೇರಿದ್ದೀವಿ ಅಂತ ಅಳೋಖೆ ಶುರುಮಾಡಿದ್ಲು. ನಾವೆ ಬೆಕಾದ್ರೆ ಇನ್ ಮೇಲೆ ಹೀಗೆಲ್ಲ ಮಾಡಬೇಡಿ ಅಂತ ಹೇಳೋಣ ಆದ್ರೆ ಯಾರ್ಗು ಹೇಳೋದು ಬೇಡ ಅಂತ ಹೊಸ ರಾಗ ಶುರು ಮಾಡಿದ್ಲು. ಅವತ್ತು .ಜೊಲ್ಲ್ ಅಂಕಲ್ ಬಗ್ಗೆ ಕೂಡಾ ಅಲ್ಪ ಸ್ವಲ್ಪ ಗೊತ್ತಿದ್ದರಿಂದಲೋ.ಅಥವ ದಿಕ್ಕೆಟ್ಟ ಬೆಂಗಳೂರಿನಲ್ಲಿ ಗೋಸುಂಬೆಗಳ ತರ ನಾವಿರೋದೆ ೩ ಜನ ಅಂತಾನೋ ಅಥವ ನಮ್ಮ ಅಸಾಹಾಯಕತೆಯಿಂದಲೋ ಸುಮ್ಮನಾದ್ವಿ..
ನೀವು ಕೇಳಬಹುದು ಇಷ್ಟು ಮಾತಾಡೋಳು ಅವತು ಯಕೆ ಸುಮ್ಮನಿದ್ಲು ಅಂತ. ಅದು ಪರಿಸ್ತಿತಿಯ ಕೈಗೊಂಬೆಯದ ಕ್ಷಣ ಹೇಳಿ ನಿಮ್ಮ ಮುಂದೆ ಬಚಾವ್ ಆಗಬಹುದು ನಾನು. ಆದರೇ ಕೆಲವೊಂದು ಕ್ಷಣ ಎಲ್ಲವನ್ನ ಮರೆತು ನಾನು ಒಂದು ಹುಡುಗಿ ಅದು ಹೊಟ್ಟೆಪಾಡಿಗಾಗಿ ಬಂದವಳು ಬೆಂಗಳೂರಿನಲ್ಲಿ ಗೊತ್ತುಪರಿಚಯವಿಲ್ಲ..ನಾವು ೩ ಜನ ಬಿಟ್ರ್ಎ ನಮಗೆ ಗೊತ್ತಿರುವ ಒಂದೆ ಒಂದು ಪ್ರಾಣಿ ಇಲ್ಲದ ಈ ಬೆಂಗಳೂರಿನಲ್ಲಿ ಯಾರಿಗೆ ಅಂತ ಹೇಳೋದು ಅಂತ ಯೋಚನೇ ಮಾಡೀದರೇ..ಜೀವ ಜಲ್ ಅನ್ನದೇ ಇದ್ದೀತ?..ಆದರೂ ಅವತ್ತು ನಾನು ಮಾಡಿದ ತಪ್ಪು ಇವತಿಗೂ ನನ್ನನ್ನ ಕಾಡುತ್ತಿದೆ..sorry,...
ದೇಶದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳೂ ಮಕ್ಕಳ ಮೇಲೆ ನೇ ಹೆಚ್ಚು ಅಂತ ಮತ್ತೆ ಕೆಲವೊಂದು ಮಕ್ಕಳೂ ತಮ್ಮ ಕುಟುಂಬದವರಿಂದಲೇ ಲೈಂಘಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಮತ್ತು ಅಕ್ಕಪಕ್ಕದ ಮನೆಯವರಿಂದಲೇ ಮತ್ತೆ ಕೆಲವೊಂದು ಸಲ ಪರಿಚಯವಿರುವವರಿಂದಲೇ ಅಂತ ಮೊನ್ನೆ ಪೇಪರ್ ಒದುತ್ತಿದ್ದಾಗ ತಿಳಿದ ವಿಷಯ. ಅದು ನಿಜವಿದ್ದರೂ ಇರಬಹುದು ಅಲ್ಲವ? ಏನೂ ಅರಿಯದ ವಯಸ್ಸಿನಲ್ಲಿ ಈ ರೀತಿ ಮಕ್ಕಳ ಮೇಲೆ ದೌರ್ಜನ್ಯವೆಸುಗುವ ಹಿಂಸಾ ಪ್ರಕ್ರುತಿ ನಮ್ಮ ಸಮಾಜಕ್ಕೆ ಅಂಟಿದ ಶನಿ ಅಲ್ಲವ? ಹೇಳಿ ಇವರ್ ಯಾವ ಚಪ್ಪಲಿನಲ್ಲಿ ಹೊಡಿಬೇಕು?....ಇಂತವರಿಂದ ನಮ್ಮ ದೇಶಕ್ಕೆ ಏನು ನೀರೀಕ್ಷಿಸಲು ಸಾದ್ಯ?..ಇಂತ ಕೃತ್ಯವೆಸಗುವಾಗ ತಮ್ಮ ಅಕ್ಕ-ತಂಗಿಯರ ಅಮ್ಮ ಚಿಕ್ಕಮ್ಮಂದಿರ ನೆನಪು ಬರಲ್ಲವ? ಕೆಲವೊಂದು ಸಲ ತಮ್ಮ ಮಕ್ಕಳ ನೆನಪು? ...ಮನುಷ್ಯತ್ವವಿಲ್ಲದವರಲ್ಲಿ ನೆನಪುಗಳು ಮಾನವೀಯತೆಯ ಲಕ್ಷಣಗಳನ್ನಾ ನೀರೀಕ್ಷಿಸುವುದು ದಡ್ಡತನ...
ಇಂತವರನ್ನ ಸಾಯೋ ತನಕ ನೇಣು ಕುಣಿಕೆಯಲ್ಲಿ ನೇತಾಡೊ ಹಾಗೆ ಮಾಡಬೇಕು...
ನೇತಾಜಿ ಬದುಕಿದ ದೇಶ ನಮ್ಮದು..