ಒಂದೊಂದು ಸಲ ಮನಸ್ಸಿಗೆ ಎಷ್ಟು ಹಿಂಸೆ ಆಗುತ್ತೆ ಅಂದ್ರೆ ಅದನ್ನ ಕೇವಲ ಪದಗಳಲ್ಲಿ ಹೇಳೋಕೆ ನನಗೆ ಕಷ್ಟ ಆಗುತ್ತೆ..ಕಷ್ಟ ಅನ್ನೋದಕ್ಕಿಂತ ನನಗೆ ಅದನ್ನ ಪದಗಳ ರೂಪದಲ್ಲಿ ಬರಿಯೋಕೆ ಬರಲ್ಲ ಅನ್ನಿಸುತ್ತೆ. ನಾನು ಹೀಗೆ ಕೆಟ್ಟ ಕೆಟ್ಟ ಶಬ್ಧಗಳನ್ನ ಉಪಯೋಗಿಸಿ ಬರಿತೀನಿ ಅಂತ ಯಾರೋ ಎರೆಡು ಜನ ನಾಲಾಯಕ್ ಗಳು ತಮಗೆ ಅಕ್ಕ ತಂಗಿ ಇಲ್ಲವೇನೊ ಅಥವ ತಾವು ಮೂಲತಹ ಹೆಣ್ಣು ವಿರೋಧಿಗಳೇನೊ ಅನ್ನುವ ಹಾಗೆ ಕಚಡವಾಗಿ ಮೇಲ್ ಮಾಡಿದ್ರು ಅದನ್ನ ಹೇಳೋಕೆ ನನ್ನಂತ ಬಜಾರಿ?? ಗೆ ಬೆಜಾರು ಆಗುತ್ತೆ ಬಿಡಿ ಆ ವಿಷ್ಯ..ನಾಯಿ ಬೊಗಳಿದ್ರೆ ದೇವಲೋಕ ನು ಹಾಳಗಲ್ಲ ಅಂದ ಮೇಲೆ ನನಗೆ ಹೇಗೆ ಬೇಜಾರ್ ಆಗಬೇಕು? ನೀವ್ ಬೊಗುಳ್ತಾನೆ ಇರಿ ನಾನು ನನಗೆ ಅನ್ನಿಸಿದನ್ನ ಬರಿತಾನೆ ಇರ್ತೀನಿ...
ಹಾ..ನಾನು ಮನಸ್ಸಿಗೆ ಬೆಜಾರ್ ಆಗೋ ವಿಷ್ಯ ಮತಾಡ್ತ ಇದ್ದೆ...ಇದನ್ನ ಹೇಳಿಕೋಳ್ಳೊಕು ಬೇಜಾರು ಆಗುತ್ತೆ ಕೆಲವೊಂದು ವಿಷಯಗಳನ್ನ ನಾನು ಒಂದು ಮಾತಾಡಬಾರದು ಅಂದು ಕೊಂಡ್ರು ನನಗೆ ಹಾಗೆ ಇರೋಕೆ ಆಗೋಲ್ಲ. ಮೊದಲೆ ನನ್ನ ಗೆಳತಿಯರು ಮತ್ತೆ ನಮ್ಮ office ನ ಕೊಲೀಗ್ ಗಳು ನನಗೆ ಒಂದು ಹೆಸರಿಟ್ಟು ಬಿಟ್ಟಿದ್ದಾರೆ ಬಜಾರಿ...ಪರ್ವಾಗಿಲ್ಲ ಅವರಿಷ್ಟ ಬಂದಹ ಗೆ ನನ್ ಕರಿಲಿ..ಆವತ್ತು ಭಾನುವಾರ ಎಂದಿನಂತೆ ನರಕಕ್ಕೆ[officege] ರಜೆ...ನಾನು 'ಪ್ರತಿಭಾ' ನಂದಿನಿ' ನಮ್ಮ ರೂಮಿನ ಮೇಲಿರಿವ ಟೆರೆಸ್ ಮೇಲೆ ಎಂದಿನಂತೆ ಹಾದಿನಲ್ಲಿ ಬರೋ ಹೋಗೋ ಹುಡುಗರನ್ನ[ಸುಂದರವಾದ] ನೋಡುತ್ತ ನಿಂತಿದ್ವಿ..ಅಷ್ಟರಲ್ಲಿ ಪ್ರತಿಭಾ ಇದ್ದೋಳು ನೋಡ್ರೆ ಅಲ್ಲಿ ಜೊಲ್ಲು ಅಂಕಲ್ಲು ಅಂದ್ಲು..
ನಮ್ಮ ರೂಮಿನ ಪಕ್ಕದಲ್ಲೆ ಒಂದು ಮನೆ ಅಲ್ಲಿರೊ ಅಂಕಲ್ ನ ಕಂಡ್ರೆ ಪ್ರತಿಭಾ ಮತ್ತೆ ನಂದಿನಿ ಹಾವು ತುಳಿದ ಹಾಗೆ ಆಡುತ್ತ ಇದ್ರು. ಅದಕ್ಕೆ ಕಾರಣ ಕೆಲವೊಂದು ಸಲ ಹೇಳಿದ್ರು ಕೂಡ ಇಂತ ಜೊಲ್ ಅಂಕಲ್ ಗಳೂ [ಎಲ್ಲರೂ ಅಲ್ಲ] ಎಲ್ಲ ಕಡೆ ಇರೋ ವಿಷ್ಯಾನೆ ಅಂದುಕೊಂಡು ಸುಮ್ಮನಾಗಿದ್ದೆ. ಆದರೇ ಅವತ್ತು ಕಂಡಾ ಅಸಹ್ಯವನ್ನ ನನ್ನ ಜೀವನದಲ್ಲಿ ಯಾವತ್ತು ಮರಿಯಲ್ಲ.....ಕಮ್ಮಿ ಅಂದ್ರು ಆ ಹೆಣ್ಣು ಮಗು ಗೆ ೧೦ ವರ್ಷ ವಯಸ್ಸಿರಬಹುದು. ಬಿಡು ಪಕ್ಕದ ಮನೆ ಮಗುವಲ್ಲವ ಮುದ್ದು ಮಾಡಿದರೆ ತಪ್ಪೇನ್ ಇಲ್ಲ ಅಂದುಕೊಂಡು ಸುಮ್ಮನಾದ್ವಿ..ಆದರೆ ಯಾಕೊ ಅವನ ವರ್ತನೆ ನಮಗೆ ವಿಚಿತ್ರವೆನಿಸತೊಡಗಿತು...
ಆ ಮನೆಯ ಟೆರೆಸ್ ಮೇಲೆ ಪ್ರತಿದಿನ ಮಕ್ಕಳು ಆಟ ಆಡುತ್ತವೆ ಬಿಡುವಿನ ವೇಳೆಯಲ್ಲಿ. ಆವತ್ತು ಸದ್ಯ ಯವ ಮಗುವು ಇರಲಿಲ್ಲ ಅನ್ನಿಸುತ್ತೆ..ಮಗುವನ್ನು ಮೆಲೆ ಕರೆದುಕೊಂಡು ಬಂದವನೇ ವಿಚಿತ್ರ ವರ್ತನೆ ಶುರುಮಾಡಿದ.ಅಷ್ಟು ದೊಡ್ಡ ಮಗುವನ್ನ ಎತ್ತಿ ಮುದ್ದಾಡೊ ಅವಷ್ಯಕತೆ ಕೂಡ ಇರಲಿಲ್ಲ ಅನ್ನಿಸುತ್ತೆ. ಆದರೆ ಒಂದು ಚಿಕ್ಕ ಮಗುವನ್ನ ಪ್ರೀತಿಯಿಂದ ಮುದ್ದಾಡುವುದಕ್ಕೂ ಕಾಮದ ದ್ರುಷ್ಟಿಯಿಂದ ಮುದ್ದಡುವುದಕ್ಕು ವ್ಯತ್ಯಾಸವಿಲ್ಲವ? ಮಗುವನ್ನ ಬಲವಂತವಾಗಿ ಅಪ್ಪಿಕೊಂಡು ಮುದ್ದಡುತ್ತಿದ್ದ. ಸುಮ್ಮನಿದ್ದರೇ ಅನಹುತವೆಂದು ಕೊಂಡ ಪ್ರತಿಭಾ " ಅಯ್ಯೋ ಪಾಪಿ " ಅಂತ ಕೂಗಿ ಬಿಟ್ಲು .ಪ್ರತಿಭಳನ್ನ ನೋಡಿದವನೇ ಟೆರೆಸ್ ಇಳಿದು ಓಡಿಬಿಟ್ಟ..ಹೇಳಿ ಅವತ್ತು ತಡಿಯದಿದ್ದರೆ ಎಂತಹ ಅನಾಹುತವಗುತ್ತಿತ್ತು?
ಅವತ್ತು ಕೋಪ ಸುಮ್ಮನೆ ಕಮ್ಮಿಯಾಗಿರಲಿಲ್ಲ..ಅವನ ಮನೆಗೆ ನಾನು ಮತ್ತೆ ಪ್ರತಿಭ ಹೋಗಿ ಅವನ ಮಾನ ಮರ್ಯದೆ ತೆಗೆದೇ ಬಿಡಬೇಕಂತ ಹೊರಟಿದ್ವಿ. ಆದರೆ ನಮ್ಮಲ್ಲಿ ಮಹಾನ್ ಗಾಂಧಿವಾದಿ ನಂದಿನಿ ಬೇಡ ಕಂಡ್ರೆ ಆಮೆಲೆ ನಮ್ಗೆ ಎನಾದ್ರು ತೊಂದ್ರೆ ಆದ್ರೆ? ಮೊನ್ನೆ ಮೊನ್ನೆ ಅಷ್ಟೆ ಕೆಲ್ಸಕ್ಕೆ ಸೇರಿದ್ದೀವಿ ಅಂತ ಅಳೋಖೆ ಶುರುಮಾಡಿದ್ಲು. ನಾವೆ ಬೆಕಾದ್ರೆ ಇನ್ ಮೇಲೆ ಹೀಗೆಲ್ಲ ಮಾಡಬೇಡಿ ಅಂತ ಹೇಳೋಣ ಆದ್ರೆ ಯಾರ್ಗು ಹೇಳೋದು ಬೇಡ ಅಂತ ಹೊಸ ರಾಗ ಶುರು ಮಾಡಿದ್ಲು. ಅವತ್ತು .ಜೊಲ್ಲ್ ಅಂಕಲ್ ಬಗ್ಗೆ ಕೂಡಾ ಅಲ್ಪ ಸ್ವಲ್ಪ ಗೊತ್ತಿದ್ದರಿಂದಲೋ.ಅಥವ ದಿಕ್ಕೆಟ್ಟ ಬೆಂಗಳೂರಿನಲ್ಲಿ ಗೋಸುಂಬೆಗಳ ತರ ನಾವಿರೋದೆ ೩ ಜನ ಅಂತಾನೋ ಅಥವ ನಮ್ಮ ಅಸಾಹಾಯಕತೆಯಿಂದಲೋ ಸುಮ್ಮನಾದ್ವಿ..
ನೀವು ಕೇಳಬಹುದು ಇಷ್ಟು ಮಾತಾಡೋಳು ಅವತು ಯಕೆ ಸುಮ್ಮನಿದ್ಲು ಅಂತ. ಅದು ಪರಿಸ್ತಿತಿಯ ಕೈಗೊಂಬೆಯದ ಕ್ಷಣ ಹೇಳಿ ನಿಮ್ಮ ಮುಂದೆ ಬಚಾವ್ ಆಗಬಹುದು ನಾನು. ಆದರೇ ಕೆಲವೊಂದು ಕ್ಷಣ ಎಲ್ಲವನ್ನ ಮರೆತು ನಾನು ಒಂದು ಹುಡುಗಿ ಅದು ಹೊಟ್ಟೆಪಾಡಿಗಾಗಿ ಬಂದವಳು ಬೆಂಗಳೂರಿನಲ್ಲಿ ಗೊತ್ತುಪರಿಚಯವಿಲ್ಲ..ನಾವು ೩ ಜನ ಬಿಟ್ರ್‍ಎ ನಮಗೆ ಗೊತ್ತಿರುವ ಒಂದೆ ಒಂದು ಪ್ರಾಣಿ ಇಲ್ಲದ ಈ ಬೆಂಗಳೂರಿನಲ್ಲಿ ಯಾರಿಗೆ ಅಂತ ಹೇಳೋದು ಅಂತ ಯೋಚನೇ ಮಾಡೀದರೇ..ಜೀವ ಜಲ್ ಅನ್ನದೇ ಇದ್ದೀತ?..ಆದರೂ ಅವತ್ತು ನಾನು ಮಾಡಿದ ತಪ್ಪು ಇವತಿಗೂ ನನ್ನನ್ನ ಕಾಡುತ್ತಿದೆ..sorry,...
ದೇಶದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳೂ ಮಕ್ಕಳ ಮೇಲೆ ನೇ ಹೆಚ್ಚು ಅಂತ ಮತ್ತೆ ಕೆಲವೊಂದು ಮಕ್ಕಳೂ ತಮ್ಮ ಕುಟುಂಬದವರಿಂದಲೇ ಲೈಂಘಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಮತ್ತು ಅಕ್ಕಪಕ್ಕದ ಮನೆಯವರಿಂದಲೇ ಮತ್ತೆ ಕೆಲವೊಂದು ಸಲ ಪರಿಚಯವಿರುವವರಿಂದಲೇ ಅಂತ ಮೊನ್ನೆ ಪೇಪರ್ ಒದುತ್ತಿದ್ದಾಗ ತಿಳಿದ ವಿಷಯ. ಅದು ನಿಜವಿದ್ದರೂ ಇರಬಹುದು ಅಲ್ಲವ? ಏನೂ ಅರಿಯದ ವಯಸ್ಸಿನಲ್ಲಿ ಈ ರೀತಿ ಮಕ್ಕಳ ಮೇಲೆ ದೌರ್ಜನ್ಯವೆಸುಗುವ ಹಿಂಸಾ ಪ್ರಕ್ರುತಿ ನಮ್ಮ ಸಮಾಜಕ್ಕೆ ಅಂಟಿದ ಶನಿ ಅಲ್ಲವ? ಹೇಳಿ ಇವರ್ ಯಾವ ಚಪ್ಪಲಿನಲ್ಲಿ ಹೊಡಿಬೇಕು?....ಇಂತವರಿಂದ ನಮ್ಮ ದೇಶಕ್ಕೆ ಏನು ನೀರೀಕ್ಷಿಸಲು ಸಾದ್ಯ?..ಇಂತ ಕೃತ್ಯವೆಸಗುವಾಗ ತಮ್ಮ ಅಕ್ಕ-ತಂಗಿಯರ ಅಮ್ಮ ಚಿಕ್ಕಮ್ಮಂದಿರ ನೆನಪು ಬರಲ್ಲವ? ಕೆಲವೊಂದು ಸಲ ತಮ್ಮ ಮಕ್ಕಳ ನೆನಪು? ...ಮನುಷ್ಯತ್ವವಿಲ್ಲದವರಲ್ಲಿ ನೆನಪುಗಳು ಮಾನವೀಯತೆಯ ಲಕ್ಷಣಗಳನ್ನಾ ನೀರೀಕ್ಷಿಸುವುದು ದಡ್ಡತನ...
ಇಂತವರನ್ನ ಸಾಯೋ ತನಕ ನೇಣು ಕುಣಿಕೆಯಲ್ಲಿ ನೇತಾಡೊ ಹಾಗೆ ಮಾಡಬೇಕು...
ನೇತಾಜಿ ಬದುಕಿದ ದೇಶ ನಮ್ಮದು..

5 comments:
Wonderful Beladingala baale
ಇಂಥವರನ್ನು ನೋಡಿದಾಗ ಅಸಹ್ಯ ಆಗುತ್ತದೆ. ನಾನು ನನ್ನ ರೂಮ್ ಮೆಟ್ಸು ಇಂತಹುದರ ಬಗ್ಗೆ ಮಾತಡುತ್ತಿದ್ದೆವು. ಬುದ್ದೀಯೆ ಇರದ ವಯಸ್ಸಿನಲ್ಲಿ ಆಗುವ ಲೈಂಗಿಕ ದೌರ್ಜನ್ಯಗಳನ್ನು ಹೇಗೆ ತಡೆಯುವುದು ಅಂತ ಯೋಚಿಸುತ್ತಿದ್ದೆವು. ಉತ್ತರ ಹೋಳಿಲಿಲ್ಲ ಈಗ ಅನ್ನಿಸುತ್ತಿದೆ ಇಂಥವರನ್ನ ಚಪ್ಪಾಲೀಲಿ ಹೊಡೆದರೇನೇ ಬುದ್ಡಿ ಬರೋದು.. ..
ಇಂಥಾ ಜನರಿಗೆ ಚಪ್ಪಲ್ಲಿಯಲ್ಲಿ ಹೋಡೆದರೆ ಇಲ್ಲಾ ಶಿಕ್ಷೆ ಕೊಟ್ಟರೇ
ಇವು ಕಡಿಮೆ ಆಗುತ್ತದೆ ಮತ್ತು ಇದು ಕೇವಲ ನೇತಾಜಿ ಹುಟ್ಟಿದ ದೇಶದಲ್ಲಿ ಇದೆ ಎಂದು ಭಾವಿಸುವುದೇ ದೊಡ್ಡ ತಪ್ಪು.
ಮನುಷ್ಯನ ದಾಹ ಇರುವ ಜಗತ್ತಿನ ಪ್ರತಿ ಮೂಲೆಯಲ್ಲೂ ಇದು ತಾಂಡವಾ ಆಡುತ್ತಿದೆ. ಆದರೆ ಬೆಳಕಿಗೆ ಬಂದಿರುವುದು ಕೇವಲ
ಕಟಾರ ಅಂತ ಒಂದೆರೆಡು ಮೀನುಗಳು ಮಾತ್ರ, ತಿಮಿಂಗಿಲಗಳು ಅಡಗಿ ಕೂತಿವೆ.
ಅಮಾಯಕ ಮುಗ್ಧರನ್ನು ತಮ್ಮ ಕಾಮ ವಾಂಛೆಗೆ ಬಳಸಿಕೊಳ್ಲುವದಕ್ಕೆ ಮುಖ್ಯ ಕಾರಣ ,ಅವರೂ ಸುಲಭಾವಾಗಿ ಸಿಗುತ್ತಾರೆ. ಬೆದರಿಸಿದರೆ, ಯಾರಿಗೂ ಹೇಳುವದಿಲ್ಲ ಎನ್ನುವ ಬುದ್ಧಿಯೇ ನಮ್ಮ ಜನರನ್ನೂ ಈ ಕೆಲಸಕ್ಕೆ ಪ್ರೇರೆಪಿಸುವುದು.
ಮಕ್ಕಳಿಗೆ ಮೊದಲು ಸರಿಯಾಗಿ ಹೇಳಿಕೊಡಬೇಕು, ಎಷ್ಟೆ ಒಳ್ಳೆಯವರಾಗಿ ಕಾಣುವ ಜನರು ಎನೇ ಆಮಿಷ ಒಡ್ದಿದರೂ ಹೋಗದೆ ಇರಬೇಕು. ಸ್ವಲ್ಪ ಅತಿ ಅನಿಸುವ ಹಾಗೆ ಮಾಡಿದರೆ ಮೊದಲು ಬಂದು ತಂದೆ ತಾಯಿಗಳ ಬಳಿ ಹೇಳಬೇಕು. ಅನೇಕ ಪ್ರಕರಣಗಳೂ ಮುಚ್ಚಿಟ್ಟೆ ಹೆಚ್ಚಾಗಿರುವುದು.
ನಿಜಕ್ಕೂ ಮುಂದೆ ಆ ಮಕ್ಕಳೂ ಬೆಳೆಯುತ್ತ, ಮಾನಸಿಕರಾಗಿ ಅಸ್ವಸ್ಥರಾಗುತ್ತಾರೆ. ನಿಜಕ್ಕೂ ಇದು ಸಮಾಜಕ್ಕೆ ದೊಡ್ಡ ಕಂಟಕವೇ ಸರಿ ..
mruganayanee nimma anisikege tumba thanks [:)]
dear pavvi....
intha janarige chappalinalli hodedare idu kammi agutte antha athava netaaji huttida deshadalli matra heege aagute antha nan barede illa......adu nanna aakrsoha matte netaaji melina preethi inda hage helirabahudu ashte....
hmm nimma anisikege thanks[:)] nimma comenst nijakku nange kushi tandu kodthu....
danyavaadagalu
ಪ್ರಿಯ ಬೆಳದಿಂಗಳ ಬಾಲೆ ಅವರೇ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
-ಅಮರ
info@pranati.in
Registration- Seminar on the occasion of kannadasaahithya.com 8th year Celebration
ಪ್ರೀತಿಯ ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
Post a Comment