Friday, June 8, 2007

ನೇಣಿಗೇರಿಸ ಬೇಕು................


ಒಂದೊಂದು ಸಲ ಮನಸ್ಸಿಗೆ ಎಷ್ಟು ಹಿಂಸೆ ಆಗುತ್ತೆ ಅಂದ್ರೆ ಅದನ್ನ ಕೇವಲ ಪದಗಳಲ್ಲಿ ಹೇಳೋಕೆ ನನಗೆ ಕಷ್ಟ ಆಗುತ್ತೆ..ಕಷ್ಟ ಅನ್ನೋದಕ್ಕಿಂತ ನನಗೆ ಅದನ್ನ ಪದಗಳ ರೂಪದಲ್ಲಿ ಬರಿಯೋಕೆ ಬರಲ್ಲ ಅನ್ನಿಸುತ್ತೆ. ನಾನು ಹೀಗೆ ಕೆಟ್ಟ ಕೆಟ್ಟ ಶಬ್ಧಗಳನ್ನ ಉಪಯೋಗಿಸಿ ಬರಿತೀನಿ ಅಂತ ಯಾರೋ ಎರೆಡು ಜನ ನಾಲಾಯಕ್ ಗಳು ತಮಗೆ ಅಕ್ಕ ತಂಗಿ ಇಲ್ಲವೇನೊ ಅಥವ ತಾವು ಮೂಲತಹ ಹೆಣ್ಣು ವಿರೋಧಿಗಳೇನೊ ಅನ್ನುವ ಹಾಗೆ ಕಚಡವಾಗಿ ಮೇಲ್ ಮಾಡಿದ್ರು ಅದನ್ನ ಹೇಳೋಕೆ ನನ್ನಂತ ಬಜಾರಿ?? ಗೆ ಬೆಜಾರು ಆಗುತ್ತೆ ಬಿಡಿ ಆ ವಿಷ್ಯ..ನಾಯಿ ಬೊಗಳಿದ್ರೆ ದೇವಲೋಕ ನು ಹಾಳಗಲ್ಲ ಅಂದ ಮೇಲೆ ನನಗೆ ಹೇಗೆ ಬೇಜಾರ್ ಆಗಬೇಕು? ನೀವ್ ಬೊಗುಳ್ತಾನೆ ಇರಿ ನಾನು ನನಗೆ ಅನ್ನಿಸಿದನ್ನ ಬರಿತಾನೆ ಇರ್ತೀನಿ...

ಹಾ..ನಾನು ಮನಸ್ಸಿಗೆ ಬೆಜಾರ್ ಆಗೋ ವಿಷ್ಯ ಮತಾಡ್ತ ಇದ್ದೆ...ಇದನ್ನ ಹೇಳಿಕೋಳ್ಳೊಕು ಬೇಜಾರು ಆಗುತ್ತೆ ಕೆಲವೊಂದು ವಿಷಯಗಳನ್ನ ನಾನು ಒಂದು ಮಾತಾಡಬಾರದು ಅಂದು ಕೊಂಡ್ರು ನನಗೆ ಹಾಗೆ ಇರೋಕೆ ಆಗೋಲ್ಲ. ಮೊದಲೆ ನನ್ನ ಗೆಳತಿಯರು ಮತ್ತೆ ನಮ್ಮ office ನ ಕೊಲೀಗ್ ಗಳು ನನಗೆ ಒಂದು ಹೆಸರಿಟ್ಟು ಬಿಟ್ಟಿದ್ದಾರೆ ಬಜಾರಿ...ಪರ್ವಾಗಿಲ್ಲ ಅವರಿಷ್ಟ ಬಂದಹ ಗೆ ನನ್ ಕರಿಲಿ..ಆವತ್ತು ಭಾನುವಾರ ಎಂದಿನಂತೆ ನರಕಕ್ಕೆ[officege] ರಜೆ...ನಾನು 'ಪ್ರತಿಭಾ' ನಂದಿನಿ' ನಮ್ಮ ರೂಮಿನ ಮೇಲಿರಿವ ಟೆರೆಸ್ ಮೇಲೆ ಎಂದಿನಂತೆ ಹಾದಿನಲ್ಲಿ ಬರೋ ಹೋಗೋ ಹುಡುಗರನ್ನ[ಸುಂದರವಾದ] ನೋಡುತ್ತ ನಿಂತಿದ್ವಿ..ಅಷ್ಟರಲ್ಲಿ ಪ್ರತಿಭಾ ಇದ್ದೋಳು ನೋಡ್ರೆ ಅಲ್ಲಿ ಜೊಲ್ಲು ಅಂಕಲ್ಲು ಅಂದ್ಲು..

ನಮ್ಮ ರೂಮಿನ ಪಕ್ಕದಲ್ಲೆ ಒಂದು ಮನೆ ಅಲ್ಲಿರೊ ಅಂಕಲ್ ನ ಕಂಡ್ರೆ ಪ್ರತಿಭಾ ಮತ್ತೆ ನಂದಿನಿ ಹಾವು ತುಳಿದ ಹಾಗೆ ಆಡುತ್ತ ಇದ್ರು. ಅದಕ್ಕೆ ಕಾರಣ ಕೆಲವೊಂದು ಸಲ ಹೇಳಿದ್ರು ಕೂಡ ಇಂತ ಜೊಲ್ ಅಂಕಲ್ ಗಳೂ [ಎಲ್ಲರೂ ಅಲ್ಲ] ಎಲ್ಲ ಕಡೆ ಇರೋ ವಿಷ್ಯಾನೆ ಅಂದುಕೊಂಡು ಸುಮ್ಮನಾಗಿದ್ದೆ. ಆದರೇ ಅವತ್ತು ಕಂಡಾ ಅಸಹ್ಯವನ್ನ ನನ್ನ ಜೀವನದಲ್ಲಿ ಯಾವತ್ತು ಮರಿಯಲ್ಲ.....ಕಮ್ಮಿ ಅಂದ್ರು ಆ ಹೆಣ್ಣು ಮಗು ಗೆ ೧೦ ವರ್ಷ ವಯಸ್ಸಿರಬಹುದು. ಬಿಡು ಪಕ್ಕದ ಮನೆ ಮಗುವಲ್ಲವ ಮುದ್ದು ಮಾಡಿದರೆ ತಪ್ಪೇನ್ ಇಲ್ಲ ಅಂದುಕೊಂಡು ಸುಮ್ಮನಾದ್ವಿ..ಆದರೆ ಯಾಕೊ ಅವನ ವರ್ತನೆ ನಮಗೆ ವಿಚಿತ್ರವೆನಿಸತೊಡಗಿತು...

ಆ ಮನೆಯ ಟೆರೆಸ್ ಮೇಲೆ ಪ್ರತಿದಿನ ಮಕ್ಕಳು ಆಟ ಆಡುತ್ತವೆ ಬಿಡುವಿನ ವೇಳೆಯಲ್ಲಿ. ಆವತ್ತು ಸದ್ಯ ಯವ ಮಗುವು ಇರಲಿಲ್ಲ ಅನ್ನಿಸುತ್ತೆ..ಮಗುವನ್ನು ಮೆಲೆ ಕರೆದುಕೊಂಡು ಬಂದವನೇ ವಿಚಿತ್ರ ವರ್ತನೆ ಶುರುಮಾಡಿದ.ಅಷ್ಟು ದೊಡ್ಡ ಮಗುವನ್ನ ಎತ್ತಿ ಮುದ್ದಾಡೊ ಅವಷ್ಯಕತೆ ಕೂಡ ಇರಲಿಲ್ಲ ಅನ್ನಿಸುತ್ತೆ. ಆದರೆ ಒಂದು ಚಿಕ್ಕ ಮಗುವನ್ನ ಪ್ರೀತಿಯಿಂದ ಮುದ್ದಾಡುವುದಕ್ಕೂ ಕಾಮದ ದ್ರುಷ್ಟಿಯಿಂದ ಮುದ್ದಡುವುದಕ್ಕು ವ್ಯತ್ಯಾಸವಿಲ್ಲವ? ಮಗುವನ್ನ ಬಲವಂತವಾಗಿ ಅಪ್ಪಿಕೊಂಡು ಮುದ್ದಡುತ್ತಿದ್ದ. ಸುಮ್ಮನಿದ್ದರೇ ಅನಹುತವೆಂದು ಕೊಂಡ ಪ್ರತಿಭಾ " ಅಯ್ಯೋ ಪಾಪಿ " ಅಂತ ಕೂಗಿ ಬಿಟ್ಲು .ಪ್ರತಿಭಳನ್ನ ನೋಡಿದವನೇ ಟೆರೆಸ್ ಇಳಿದು ಓಡಿಬಿಟ್ಟ..ಹೇಳಿ ಅವತ್ತು ತಡಿಯದಿದ್ದರೆ ಎಂತಹ ಅನಾಹುತವಗುತ್ತಿತ್ತು?

ಅವತ್ತು ಕೋಪ ಸುಮ್ಮನೆ ಕಮ್ಮಿಯಾಗಿರಲಿಲ್ಲ..ಅವನ ಮನೆಗೆ ನಾನು ಮತ್ತೆ ಪ್ರತಿಭ ಹೋಗಿ ಅವನ ಮಾನ ಮರ್ಯದೆ ತೆಗೆದೇ ಬಿಡಬೇಕಂತ ಹೊರಟಿದ್ವಿ. ಆದರೆ ನಮ್ಮಲ್ಲಿ ಮಹಾನ್ ಗಾಂಧಿವಾದಿ ನಂದಿನಿ ಬೇಡ ಕಂಡ್ರೆ ಆಮೆಲೆ ನಮ್ಗೆ ಎನಾದ್ರು ತೊಂದ್ರೆ ಆದ್ರೆ? ಮೊನ್ನೆ ಮೊನ್ನೆ ಅಷ್ಟೆ ಕೆಲ್ಸಕ್ಕೆ ಸೇರಿದ್ದೀವಿ ಅಂತ ಅಳೋಖೆ ಶುರುಮಾಡಿದ್ಲು. ನಾವೆ ಬೆಕಾದ್ರೆ ಇನ್ ಮೇಲೆ ಹೀಗೆಲ್ಲ ಮಾಡಬೇಡಿ ಅಂತ ಹೇಳೋಣ ಆದ್ರೆ ಯಾರ್ಗು ಹೇಳೋದು ಬೇಡ ಅಂತ ಹೊಸ ರಾಗ ಶುರು ಮಾಡಿದ್ಲು. ಅವತ್ತು .ಜೊಲ್ಲ್ ಅಂಕಲ್ ಬಗ್ಗೆ ಕೂಡಾ ಅಲ್ಪ ಸ್ವಲ್ಪ ಗೊತ್ತಿದ್ದರಿಂದಲೋ.ಅಥವ ದಿಕ್ಕೆಟ್ಟ ಬೆಂಗಳೂರಿನಲ್ಲಿ ಗೋಸುಂಬೆಗಳ ತರ ನಾವಿರೋದೆ ೩ ಜನ ಅಂತಾನೋ ಅಥವ ನಮ್ಮ ಅಸಾಹಾಯಕತೆಯಿಂದಲೋ ಸುಮ್ಮನಾದ್ವಿ..

ನೀವು ಕೇಳಬಹುದು ಇಷ್ಟು ಮಾತಾಡೋಳು ಅವತು ಯಕೆ ಸುಮ್ಮನಿದ್ಲು ಅಂತ. ಅದು ಪರಿಸ್ತಿತಿಯ ಕೈಗೊಂಬೆಯದ ಕ್ಷಣ ಹೇಳಿ ನಿಮ್ಮ ಮುಂದೆ ಬಚಾವ್ ಆಗಬಹುದು ನಾನು. ಆದರೇ ಕೆಲವೊಂದು ಕ್ಷಣ ಎಲ್ಲವನ್ನ ಮರೆತು ನಾನು ಒಂದು ಹುಡುಗಿ ಅದು ಹೊಟ್ಟೆಪಾಡಿಗಾಗಿ ಬಂದವಳು ಬೆಂಗಳೂರಿನಲ್ಲಿ ಗೊತ್ತುಪರಿಚಯವಿಲ್ಲ..ನಾವು ೩ ಜನ ಬಿಟ್ರ್‍ಎ ನಮಗೆ ಗೊತ್ತಿರುವ ಒಂದೆ ಒಂದು ಪ್ರಾಣಿ ಇಲ್ಲದ ಈ ಬೆಂಗಳೂರಿನಲ್ಲಿ ಯಾರಿಗೆ ಅಂತ ಹೇಳೋದು ಅಂತ ಯೋಚನೇ ಮಾಡೀದರೇ..ಜೀವ ಜಲ್ ಅನ್ನದೇ ಇದ್ದೀತ?..ಆದರೂ ಅವತ್ತು ನಾನು ಮಾಡಿದ ತಪ್ಪು ಇವತಿಗೂ ನನ್ನನ್ನ ಕಾಡುತ್ತಿದೆ..sorry,...

ದೇಶದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳೂ ಮಕ್ಕಳ ಮೇಲೆ ನೇ ಹೆಚ್ಚು ಅಂತ ಮತ್ತೆ ಕೆಲವೊಂದು ಮಕ್ಕಳೂ ತಮ್ಮ ಕುಟುಂಬದವರಿಂದಲೇ ಲೈಂಘಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಮತ್ತು ಅಕ್ಕಪಕ್ಕದ ಮನೆಯವರಿಂದಲೇ ಮತ್ತೆ ಕೆಲವೊಂದು ಸಲ ಪರಿಚಯವಿರುವವರಿಂದಲೇ ಅಂತ ಮೊನ್ನೆ ಪೇಪರ್ ಒದುತ್ತಿದ್ದಾಗ ತಿಳಿದ ವಿಷಯ. ಅದು ನಿಜವಿದ್ದರೂ ಇರಬಹುದು ಅಲ್ಲವ? ಏನೂ ಅರಿಯದ ವಯಸ್ಸಿನಲ್ಲಿ ಈ ರೀತಿ ಮಕ್ಕಳ ಮೇಲೆ ದೌರ್ಜನ್ಯವೆಸುಗುವ ಹಿಂಸಾ ಪ್ರಕ್ರುತಿ ನಮ್ಮ ಸಮಾಜಕ್ಕೆ ಅಂಟಿದ ಶನಿ ಅಲ್ಲವ? ಹೇಳಿ ಇವರ್ ಯಾವ ಚಪ್ಪಲಿನಲ್ಲಿ ಹೊಡಿಬೇಕು?....ಇಂತವರಿಂದ ನಮ್ಮ ದೇಶಕ್ಕೆ ಏನು ನೀರೀಕ್ಷಿಸಲು ಸಾದ್ಯ?..ಇಂತ ಕೃತ್ಯವೆಸಗುವಾಗ ತಮ್ಮ ಅಕ್ಕ-ತಂಗಿಯರ ಅಮ್ಮ ಚಿಕ್ಕಮ್ಮಂದಿರ ನೆನಪು ಬರಲ್ಲವ? ಕೆಲವೊಂದು ಸಲ ತಮ್ಮ ಮಕ್ಕಳ ನೆನಪು? ...ಮನುಷ್ಯತ್ವವಿಲ್ಲದವರಲ್ಲಿ ನೆನಪುಗಳು ಮಾನವೀಯತೆಯ ಲಕ್ಷಣಗಳನ್ನಾ ನೀರೀಕ್ಷಿಸುವುದು ದಡ್ಡತನ...

ಇಂತವರನ್ನ ಸಾಯೋ ತನಕ ನೇಣು ಕುಣಿಕೆಯಲ್ಲಿ ನೇತಾಡೊ ಹಾಗೆ ಮಾಡಬೇಕು...

ನೇತಾಜಿ ಬದುಕಿದ ದೇಶ ನಮ್ಮದು..

Monday, June 4, 2007

ಮಾನಗೆಟ್ಟ ಶಾಸಕ VS 3 ನ ಬಿಟ್ಟ ನರ್ಸ್ ಜಯಲಕ್ಷ್ಮಿ


ಇಬ್ರೂ ಮಾನಮರ್ಯಾದೆ ಇಲ್ಲದ ನಿರ್ಲಜ್ಜರೆ...ಇದರಲ್ಲಿ ಯಾರು ಹೆಚ್ಚು ಯಾರು ಕಮ್ಮಿ ಅಂತ ಮಾತಾಡೋದೆ ತಪ್ಪಂದ್ರೆ ತಪ್ಪು..ಇವಳು ಒಂದು ಹೆಣ್ಣು ಅನ್ನೋದು ನೆನಪಿಲ್ಲದವಳ ಹಾಗೆ ಮಾದ್ಯಮದವರ ಮುಂದೆ ನಾಯಿ ಕಿರುಚಿದ ಹಾಗೆ ಬೊಬ್ಬಿಡುವ ಈ ಮೇಕಪ್ ರಾಣೀ.....ಇವನು ತಾನೊಬ್ಬ ತಲ್ಲೂಕು ಪ್ರತಿನಿಧಿಸುವ ರಾಜಕಾರಣಿ ಅನ್ನೋದನ್ನ ಮರೆತು ಪರಮ ನಿರ್ಲಜ್ಜನಹ್ಾಗೆ ಅಸಹ್ಯಕರ ಪೋಟೋಗಳನ್ನ ಮದ್ಯಮದವರ ಮುಂದೆ ಪ್ರದರ್ಶಿಸುತ್ತ ಹಲ್ಕಿರಿಯುತ್ತಿದ್ದ...ತಾನೇನು ಕಮ್ಮಿ ಅನ್ನುವ ಹಾಗೆ ಈ ಮಾನಗೆಟ್ಟ ಜಯಲಕ್ಷ್ಮಿ ಇನ್ನು ಅಸಹ್ಯಕರವದ ಬಂಗಿಗಳ ಚಿತ್ರಗಳನ್ನ ಮಾದ್ಯಮದವರ ಮುಂದೆ ಪ್ರದರ್ಶನಕಿಟ್ಟಳಲ್ಲಾ....ಇವರದೇನು ಮನುಷ್ಯಜನ್ಮವಾ?


4 ಗೋಡೆಗಳ ಮದ್ಯೆ ಅನೈತಿಕವಾಗಿ ನಡೆದ ಸಂಗತಿಯನ್ನ ಹೀಗೆ ಸಾವ್ರಜನಿಕವಗಿ ಪ್ರದರ್ಶನಕ್ಕಿಡುವುದು ಯಾವ ಮನವೀಯತೆಯ ಲಕ್ಷಣ? ಯಾವ ಸಂಸ್ಕ್ರುತಿಯನ್ನ ಜಗತ್ತಿತ್ತಿಗೆ ಸಾರಲು ಹೊರಟಿದ್ದಾರೆ? ಯಾವ ಪುರುಶಾರ್ತಕ್ಕೆ? ಯಾರ ಮನೆ ,ಯಾವ ದೇಶವನ್ನ ಉದ್ದಾರಮಾಡಬೇಕಾಗಿದೆ ಇವರು?...ಮಾಡಿದ್ದೆ ಹಲ್ಕಟ್ ಕೆಲ್ಸ ಅದ್ರಲ್ಲಿ ನಂದು ಸ್ವಲ್ಪ ನಿಂದೇ ಜಾಸ್ತಿ ಅಂತ ಸಾರ್ವಜನಿಕವಾಗಿ ಬೊಬ್ಬೆಹೊಡೆಯುತ್ತಿದ್ದಾರಲ್ಲ ಇವರನ್ನ ಯಾವ ಚಪ್ಪಲಿನಲ್ಲಿ ಹೊಡಿಬೇಕು?...


ಮಾದ್ಯಮದವರು ಬಿಡಿ...ಒಳ್ಳೆ ರಸಗುಲ್ಲ ಸಿಕ್ಕಿದ ಹಾಗೆ ಇವರೇನು ನ್ಯಾಷನಲ್ ಪಿಗರ್ಸ್ ಅನ್ನೊ ಮಟ್ಟಕ್ಕೆ ಈ ವಿವಾದವನ್ನ ತಗೊಂಡು ಹೋಗಿಬಿಟ್ರು....ಇದರಲ್ಲಿ ಮಾದ್ಯಮದವರ ತಪ್ಪೆಷ್ಟಿದೆ ಅಂತ ಎಲ್ಲಾರಿಗೂ ಗೊತ್ತು....ಯಾರೋ ತೀಟೆ ತೀರಿಸಿಕೊಳ್ಳಲು ಮಾಡಿಕೊಂಡ ಹಲ್ಕಾ ಕೆಲಸಕ್ಕೆ ಇಷ್ಟೋಂದು ಪ್ರಚಾರ ಕೊಟ್ರ್‍ಅಲ್ಲ ಇವರ ಬುದ್ದಿಗೇನಾಗಿತ್ತು? ರೈತ ತಿನ್ನೊಕೆ ಅನ್ನ ಇಲ್ಲದೆ ಸಾಯ್ತ ಇದ್ದಾನೆ ಮಳೆ ಇಲ್ಲ ಕಿತ್ತು ತಿನ್ನುತ್ತಿರ ಬಡತನದ ಬೇಗೆ..ಈ ಜಾಲಪ್ಪನಂತ ನಮಕ್ ಹರಾಮ್ ನನ್ ಮಕ್ಕಳ ಹಕೀಕತ್ ನಿಂದಾಗಿ ವಿಧ್ಯಾರ್ತಿಗಳ ಜೀವನ ಡೋಲಾಯಮಾನವಾಗಿದೆ ...ಬ್ರಷ್ಟ ರಾಜಕೀಯ ವ್ಯವಸ್ತೆ ಕುಲಗೆಟ್ಟುಹೋಗಿದೆ...ಇದೆಲ್ಲಕ್ಆಣುತ್ತಿಲ್ಲವ ಮಾದ್ಯಮದ ಮಹಾಷಯರಿಗೆ? ಯಾರದೋ ಮನೆನಲ್ಲಿ ನಡೆದ ಇಂತ ಹಾದರಕ್ಕೆ ಇಷ್ಟೋಂದು ಪ್ರಾಮುಖ್ಯತೆ ಯಾಕೆ?


ಇನ್ ಮುಂದೆ ಈ ರೇಣುಕಾಚಾರ್ಯ ಯಾವ ಮುಖ ಇಟ್ಟುಂಕೊಂಡು ತನ್ನ ಕ್ಷೆತ್ರದ ಜನಕ್ಕೆ ಮುಖತೋರಿಸುತ್ತಾನೆ? ಜನಕ್ಕಿರ್ಲಿರೀ ತನ್ನ ಹೆಂಡತಿಮಕ್ಕಳ ಮುಖಾ ಆದ್ರು ನೋಡುತ್ತಾನ? ಬಿಡೀ ಎ ಬಂಡರಿಗೆಲ್ಲ ಇದೆಲ್ಲ ಮಾಮೂಲೆ...ಮತ್ತೆ ಚುನಾವಣೆಗೆ ನಿಂತು ಗೆದ್ದು ಬಂದ್ರೆ ಆಶ್ಚರ್ಯವಿಲ್ಲ ಯಾಕಂದ್ರೆ ಇದು ಇಂಡಿಯ..............


Sunday, June 3, 2007

ರಾಧಿಕಾ ಏನೇ ನಿನ್ನ ಸರಸ....


ಎಲ್ಲಿಂದ ನಗಬೇಕೋ ತಿಳಿತಿಲ್ಲ..ಅಲ್ಲ ಕೂಲಿ ನಾಲಿ ಮಾಡಿ ಜನ ಉಪವಾಸ ಬೀಳ್ತ ಇರೋ ಈ ಕಾಲದಲ್ಲಿ ಕೋಟಿಯ ಬೆಲೆ ನಮ್ಮಂತ ಸಾಮಾನ್ಯ ಜನಕ್ಕೆ ಹೇಗಾದ್ರು ಅರ್ತ ಆಗಬೇಕು ಹೇಳಿ ನೋಡೋಣ?..ರಾಧಿಕಮ್ಮ ಏನಮ್ಮ ನಿನ್ನ ಗೋಳು..ಅಲ್ಲಮ್ಮ ನೀನೂ ಮಾಡಿದ್ದೆ ೧೭ ಅಥವ ೨೦ ಸಿನಿಮಾಗಳೂ....ಅದ್ರಲ್ಲಿ ನಿನ್ ಮೂತಿಗೆ ಸಿಕ್ಕಿದ್ದೆಷ್ಟು? ಒಂದು ಒಂದು ಸಿನಿಮಾಕ್ಕು ೨ ಲಕ್ಷ ಅಂದ್ರೆ ೪೦ ಲಕ್ಷ ಆಯ್ತಲ್ಲಮ್ಮ?...ನಿಮ್ಮ್ ಅಪ್ಪ ಏನ್ ಅಂತಾ ಕುಬೇರನಿಗೆ ಹುಟ್ಟೀದವನಲ್ಲ..ನಿಮ್ ವಂಶಸ್ತರೇನೂ ವಿಜಯ್ ಮಲ್ಯಾ ಚಿಕ್ಕಪ್ಪನ ದೊಡ್ಡಪ್ಪನ ಮೊಮ್ಮಕ್ಕಳ ಮರಿಮಕ್ಕಳಲ್ಲ..ಆದ್ರು ಇದೆಲ್ಲ ಹೇಗೇ ತಾಯಿ? ಅಲ್ಲ ನಿನ್ಗೆ ೧೪ ಕೋಟೀ ಎಲ್ಲಿಂದ ಬಂತು? ಪಾಪ ಬಿಡು" ಸಾತನೂರಿನ ಶ್ರೀ ಶ್ರೀ ಶಿವಕುಮಾರ ಸ್ವಾಮಿ ಮತ್ತೆ ಬಳ್ಳಾರಿಯ ಲಾರ್ಡ್ ಅನಿಲ ಸ್ವಾಮಿ ಮತ್ತೆ ಅಲ್ಪ ಸ್ವಲ್ಪ ಜೋಕು'ಮಾರಸ್ವಾಮಿಯ ಆಶೀರ್ವಾದದಿಂದ "ರಾತ್ರಿ ರಾತ್ರಿ ರಾತ್ರಿ ರಾತ್ರಿ ರಾತ್ರಿಯೇ ಅಗರ್ಭಶ್ರೀಮಂತೆಯಾದ ನಿನ್ನನ್ನ ನಾವು ಯಾವ ಬಾಯಿಯಿಂದ ಹೊಲಸು ಅನ್ನಲು ಸಾದ್ಯ ತಾಯೀ ರಾಧಿಕೇಶ್ವರೀ......


ಸಿನಿಮಾಗಲಲ್ಲಿ ಪತಿವ್ರತೆಯ ಪಾತ್ರ ಮಾತ್ರ ಮಾಡಿದರೇ ಸಾಲದಮ್ಮ ನಿಜಜೀವನದಲ್ಲು ಅಲ್ಪಸ್ವಲ್ಪವಾದರೂ ಮಾನವಂತ ಹೆಣ್ಣುಮಗಲಾಗಿ ನಡೆದುಕೊಳ್ಳೋದು ಮುಖ್ಯ ಅಲ್ಲವ? ನೀವೆ ನಿಮ್ಮಂತ ಮಹಾನ್ ??ಜನಗಳೇ ಹಿಂಗಾದ್ರೆ ನಮ್ಮಂತ ಚೋಟಾ ಜನರ ಗತಿಯೇನಮ್ಮ...ಸಾಮಾನ್ಯಜನರ ಜೀವನದಲ್ಲಿ ಸಿನಿಮಾದ ಮೂಲಕ ಅಸಮಾನ್ಯ ತಾರೆಗಳಾಗಿ ಮೆರೆದ ನೀವು ಹಿಂಗೆ ಇಂಗುತಿಂದ ಮಂಗಮ್ಮಗಳಾಗಿ ಬಿಟ್ರಲ್ಲ?......


ರೋಡಿಗಿಳೀ ರಾಧಿಕ...ನಿನ್ ಮನೆ ಹಳಾಗ.....೧೪ ಕೋಟಿ ಇರ್ಲಿ ಇನ್ ಮುಂದೆ ನಿನ್ ಮಾನ ೧೪ ರೂಪಾಯಿಗೂ ಲಾಯಕ್ಕಿಲ್ಲ ತಿಳ್ಖೋ.....ಥು...ನಾಚಿಕೆ ಇಲ್ಲದ ಹಲ್ಕಾಗಳೂ.......

ಎನ್ ಕುಮಾರ ಕಂಠೀರವ?


ಪಾಪ ....150 ಕೋಟಿ ವಿಷ್ಯ ಶ್ರೀ ಶ್ರೀ ವೆಂಕಟರಮಣನ ಪಾದಕ್ಕೆ ಸೇರ್ಕೋಂಡು ಬಿಡ್ತು....ನೋಡಿ ಕುಮಾರ್ ಸ್ವಾಮಿಗಳನ್ನ ಈಗ ಹಿಡಿಯೋರು ಯಾರು ಇಲ್ಲ..ಗ್ರಾಮವಾಸ್ತವ್ಯ ಮಾಡ್ತ ಮಾಡ್ತ ಹೀರೊ ಆಗಿ ಮೆರೆದಾಡ್ತ ಇದ್ರೆ..ನೂರ ಐವತ್ತು ಕೋಟಿ ವಿಷ್ಯ ಕೆಮ್ಮಣ್ಣುಗುಂಡಿ ಕೆಂಪು ಮಣ್ಣಿನಲ್ಲಿ ಲೀನ ಆಗುತ್ತ ಇದೆ...ಈ ದೇಶದಲ್ಲಿ ಎಲ್ಲವೂ ಸಾದ್ಯ ಬಿಡಿ..ಬಯಂಕರ ಅತ್ಯಾಚಾರ ಮಾಡಿ ತಪ್ಪಿಸಿಕೊಳ್ಳುವ ಈ ಬಯಂಕರ ದೇಶದಲ್ಲಿ ಇನ್ನು ಯಾವನೊ ಒಬ್ಬ ತಲೆಮಾಸಿದ ರಾಜಕಾರಣಿಯ 150 ಕೋಟಿ ಅತ್ಯಾಚಾರ ಯಾವ ಮೂಲೆಗೆ ಸಮ ಅಲ್ಲವ?...೧೫೦ ಕೋಟಿ ಆಪಾಧನೆ ಮಾಡಿದ ಈ ರೆಡ್ಡಿ ಎನ್ ಮಹಾ ಸಾಚನ? ಅದು ಇಲ್ಲ ಅವನು ತಲೆ ಹಿಡುಕ ಬಡ್ಡಿಮಗನೆ ಅಲ್ಲವ?...ಅವನದ್ದು ನೂರಾರು ತಾಪತ್ರಯಗಳೂ...ಸೀಡಿ ಬಿಡ್ತೀನಿ ಬಿಡ್ತೀನಿ ಅಂತ ರೈಲ್ ಬಿಟ್ಟಿದ್ದೇ ಆಯ್ತು..ಬರೀ ಕೆರೆಹಾವು ಬಿಟ್ಟನೇ ಹೊರತು ನಾಗರಹಾವು ಬಿಡ್ಲೇ ಇಲ್ಲ ಬಿಡಿ....

ಮಾನ ಮರ್ಯಾದೆ ಇದೆ ಏನ್ರಿ ಈ ಹಲ್ಕಾಗಳಿಗೆ...ನೋಡಿ ಕುಮಾರ್ ಸ್ವಾಮಿ ಅಧಿಕಾರ ಬಿಟ್ಟು ಹೋಗೋ ದಿನ ಹತ್ರ ಬಂದ ಹಾಗೆ ಅವರಪ್ಪ ಈ ದೇಶಕ್ಕೆ ಅಂಟಿದ ಶನಿ ಈ ದೇವೇಗೌಡ ಎಂತೆಂತಾ ನಾಟಕಾ ಆಡೋಕೆ ಶುರುಮಾಡುತ್ತ ಇದ್ದಾನೆ ಅಂತ..ಎನ್ ಈ ರಾಜ್ಯವನ್ನ ಇವರ ವಂಶಸ್ತರೇ ಕೊಳ್ಳೆಹೊಡೀಬೇಕ?...ನೋಡಿ ಕುಮಾರ ಸ್ವಾಮಿಗಳೇ ಅದು ಇದು ಮಾಡ್ತ ಒಳ್ಳೆ ಮುಖ್ಯಮಂತ್ರಿ????? ಅಂತ ಹೆಸರು ಬೇರೆ ತಗೊಂಡಿದ್ದೀರ....ಈಗ ಆಗಲೇ ಜಬರ್ದಸ್ತು ಊಟ ಮಾಡೊಕೆ ರೆಡೀ ಆಗಿರುವ ಗೋಸುಂಬೆ ಮುಖದ ಎಡೆಯೂರಪ್ಪನಿಗೆ ಅಧಿಕಾರ ಬಿಟ್ಟು ಕೊಡ್ಲಿಲ್ಲ ಅಂದ್ರೆ ಪಾಪ ಆ ಚಪಲಚನ್ನಿಗರಾಯ ಎಡೆಯೂರಪ್ಪ ಯಾವುದಾದ್ರು ಮಾಟ ಮಾಡುಸ್ಬುಟ್ಟಾನು..ಹುಸಾರಾಗಿರಪ್ಪ....

ಎಲ್ಲ ಕಳ್ರೆ ಬಿಡ್ರಿ ನೀವು ನಿಮ್ಮ್ ಹಣೆಬರಹಗಳೆಲ್ಲ ನಮ್ ಜನಕ್ಕೆ ಗೊತ್ತು...ಮಾನ ಮರ್ಯಾದೆ ಇಲ್ಲದ ಗೋಸುಂಬೆಗಳೂ ನೀವು...